ಪರ್ಲಡ್ಕ, ಪುತ್ತೂರು, ಕರ್ನಾಟಕ - 574201.

ಸಮಯ
10:00 AM - 6:00 PM

ಬಾಲವನದಲ್ಲಿ "ಸಾಂಸ್ಕೃತಿಕ ಸಂಪನ್ನ" - ವಾರದ ಕಾರ್ಯಕ್ರಮಗಳಿಗೆ ಚಾಲನೆ

ಡಾ.ಶಿವರಾಮ ಕಾರಂತರ ಬಾಲವನ ಪುತ್ತೂರು, ಇಲ್ಲಿ ದಿನಾಂಕ 07.08.2020ರಂದು ಶುಕ್ರವಾರ ಪೂರ್ವಾಹ್ನ 11.00ಗಂಟೆಗೆ "ಬಾಲವನ ವಾರದ ಕಾರ್ಯಕ್ರಮ" ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯುವ ಕಲಾವಿದರಿಂದ ರಂಗಗೀತೆ, ಪರಿಸರ ಗೀತೆ ಹಾಗೂ ಜಾನಪದ ಗೀತೆಗಳ ಆನ್ ಲೈನ್ ಗಾಯನ ಪ್ರಸಾರವಾಗಲಿದೆ. ಕಾರ್ಯಕ್ರಮಕ್ಕೆ ಪುತ್ತೂರಿನ ಮಾನ್ಯ ಶಾಸಕರಾದ ಶ್ರೀ ಸಂಜೀವ ಮಠಂದೂರುರವರು ಚಾಲನೆ ನೀಡಲಿದ್ದಾರೆ. ಮಾನ್ಯ ಸಹಾಯಕ ಆಯುಕ್ತರಾದ ಡಾ.ಯತೀಶ್ ಉಳ್ಳಾಲ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ರಂಗ ಸಮಾಜದ ಸದಸ್ಯರಾದ ಜೀವನ್ ರಾಂ ಸುಳ್ಯ ಉಪಸ್ಥಿತರಿರುತ್ತಾರೆ. ನಮ್ಮೊಂದಿಗೆ ಕಲಾವಿದರಾಗಿ ರಂಗ ನಿರ್ದೇಶಕ ಲೋಕೇಶ್ ಊರುಬೈಲು, ಚಿತ್ರನಟ, ನೀನಾಸಂ ಪದವೀಧರ ಮೋಹನ್ ಶೇಣಿ, ಪ್ರತಿಭಾನ್ವಿತ ಯುವ ಕಲಾವಿದ ಮಯೂರ ಅಂಬೆಕಲ್ಲು ಹಾಗೂ ಇನ್ನೋರ್ವ ಕಲಾವಿದ ಮಯೂರ ನಾಯ್ಗ ಇವರು ಭಾಗವಹಿಸುತ್ತಾರೆ. ಬಾಲವನದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕ ಕೃಷ್ಣಪ್ಪ ಬಂಬಿಲರವರು ಸಂಯೋಜಿಸಲಿದ್ದಾರೆ. ಈ ಕಾರ್ಯಕ್ರಮದ ಪ್ರಸಾರ ಸಹಕಾರವನ್ನು ವಿಭಾ ಟೆಕ್ನಾಲಜಿ ಪತ್ತೂರು ಹಾಗೂ ಸುದ್ದಿ ಮಲ್ಟಿಮೀಡಿಯಾ ಸೆಂಟರ್ ಪುತ್ತೂರು ಇವರು ಮಾಡಲಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಕಾರ್ಯಕ್ರಮದ ಲಿಂಕ್ ಅನ್ನು ತಮಗೂ ಕಳುಹಿಸುತ್ತೇವೆ ವೀಕ್ಷಿಸುವಂತೆ ಕೋರಿಕೆ.