ಪರ್ಲಡ್ಕ, ಪುತ್ತೂರು, ಕರ್ನಾಟಕ - 574201.

ಸಮಯ
10:00 AM - 6:00 PM

ಡಾ.ಶಿವರಾಮ ಕಾರಂತರ ಬಾಲವನದಲ್ಲಿ ನಡೆಯುವ ವಾರದ ಕಾರ್ಯಕ್ರಮ ದಿನಾಂಕ: 06.11.2020ನೇ ಶುಕ್ರವಾರ ಪೂರ್ವಾಹ್ನ 11.00 ಗಂಟೆಗೆ ಆನ್ ಲೈನ್ ಮೂಲಕ ನಡೆಯಲಿದೆ. ಈ ವಾರದ ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ವಿದ್ವಾಂಸ, ಕನ್ನಡ-ತುಳು ಸಾಹಿತಿ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ರವರು ಡಾ.ಕಾರಂತರ ಕಾದಂಬರಿಗಳಲ್ಲಿ ತುಳು ಸಂಸ್ಕೃತಿ ಎನ್ನುವ ವಿಷಯದಲ್ಲಿ ಮಾತನಾಡುತ್ತಾರೆ. ಈ ಕಾರ್ಯಕ್ರಮ ಡಾ.ಶಿವರಾಮ ಕಾರಂತರ ಬಾಲವನ ಫೇಸ್ ಬುಕ್, ಯೂಟ್ಯೂಬ್, ಬಾಲವನದ ಎಲ್ಲಾ ವಾಟ್ಸ್ ಆಪ್ ಗ್ರೂಪ್, ಪುತ್ತೂರು ಸುದ್ದಿ ಮಲ್ಟಿಮೀಡಿಯಾ ಚಾನೆಲ್ ಮತ್ತು ಗ್ರೂಪ್, ಸ್ಥಳೀಯ ದೃಶ್ಯ ಮಾದ್ಯಮಗಳ ಮೂಲಕ ಪ್ರಸಾರಗೊಳ್ಳಲಿದೆ. ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಇವರ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಪುತ್ತೂರಿನ ಪತ್ರಕರ್ತರು, ತಾಲೂಕು ಪತ್ರಕರ್ತರ ಸಂಘ, ವಿಭಾ ಟೆಕ್ನಾಲಜಿ ಹಾಗೂ ಸಿಟಿವಿ ಕೇಬಲ್ ನೆಟ್ವರ್ಕ್ನವರು ಕಾರ್ಯಕ್ರಮಕ್ಕೆ ಸಹಕರಿಸಲಿದ್ದಾರೆ. ನೀವೂ ವೀಕ್ಷಿಸುವಂತೆ ಕೋರುತ್ತೇವೆ.