ಪರ್ಲಡ್ಕ, ಪುತ್ತೂರು, ಕರ್ನಾಟಕ - 574201.

ಸಮಯ
10:00 AM - 6:00 PM

ತಿಂಗಳ ಕಾರ್ಯಕ್ರಮ:

ವಿಶೇಷ ಸೂಚನೆ: ಮಾನ್ಯ ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರು ಈ ದಿನ ನಿಧನರಾದ ಕಾರಣ ಎಲ್ಲಾ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಸರಕಾರ ಇದೀಗ ಘೋಷಿಸಿದೆ. ಆದ್ದರಿಂದ ದಿನಾಂಕ 05.09.2020ರಂದು ಅ.ಗಂ 2ರಿಂದ ನಡೆಯಬೇಕಾದ ತಾಳಮದ್ದಳೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ, ಮುಂದಿನ ದಿನಾಂಕವನ್ನು ತಿಳಿಸಲಾಗುವುದು. ಸಹಕರಿಸುವಂತೆ ವಿನಂತಿ.

ಡಾ.ಶಿವರಾಮ ಕಾರಂತರ ಬಾಲವನ ಪುತ್ತೂರು ಇಲ್ಲಿ ತಿಂಗಳ ಆನ್ ಲೈನ್ ಕಾರ್ಯಕ್ರಮದ ಹಿನ್ನಲೆಯಲ್ಲಿ ಯಕ್ಷಗಾನ ತಾಳಮದ್ದಳೆ ದಾಶರಥಿ ದರ್ಶನ ನಡೆಯಲಿದೆ.

ಭಾಗವತರಾಗಿ ಗಾನಗಂಧರ್ವ ಪದ್ಯಾಣ ಗಣಪತಿ ಭಟ್, ಮದ್ದಳೆಯಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್, ಚಂಡೆಯಲ್ಲಿ ಜಗನ್ನಿವಾಸ ರಾವ್ ಪುತ್ತೂರು ಇವರು ಸಹಕರಿಸುತ್ತಾರೆ.
ಅರ್ಥದಾರಿಗಳಾಗಿ ತಾಳಮದ್ದಳೆ ಕ್ಷೇತ್ರದ ಹಿರಿಯ ಹಾಗೂ ಸುಪ್ರಸಿದ್ಧ ಕಲಾವಿದರಾದ ಡಾ.ಎಂ ಪ್ರಭಾಕರ ಜೋಶಿ (ಬಲರಾಮ) ರಾಧಾಕೃಷ್ಣ ಕಲ್ಚಾರ್ (ನಾರದ) ಸುಣ್ಣಂಬಳ ವಿಶ್ವೇಶ್ವರ ಭಟ್,(ಕೃಷ್ಣ) ಜಬ್ಬಾರ್ ಸಮೋ(ಜಾಂಬವ) ಇವರು ಭಾಗವಹಿಸುತ್ತಾರೆ.

ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲ್, ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಸಂಜೀವ ಮಠಂದೂರು, ದ.ಕ ಜಿ.ಪಂ ಅಧ್ಯಕ್ಷರಾದ ಮಾನ್ಯ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಪುತ್ತೂರು ತಾ.ಪಂ ಅಧ್ಯಕ್ಷರಾದ ಮಾನ್ಯ ಶ್ರೀ ರಾಧಾಕೃಷ್ಣ ಬೋರ್ಕರ್ ಹಾಗೂ ಸಹಾಯಕ ಆಯುಕ್ತರಾದ ಡಾ.ಯತೀಶ್ ಉಳ್ಳಾಲರವರು ಉಪಸ್ಥಿತರಿರುತ್ತಾರೆ.

ಈ ಕಾರ್ಯಕ್ರಮ ಡಾ.ಶಿವರಾಮ ಕಾರಂತರ ಬಾಲವನ ಫೇಸ್ ಬುಕ್, ಯೂಟ್ಯೂಬ್, ಬಾಲವನದ ಎಲ್ಲಾ ವಾಟ್ಸ್ ಆಪ್ ಗ್ರೂಪ್, ಪುತ್ತೂರು ಸುದ್ದಿ ಮಲ್ಟಿಮೀಡಿಯಾ ಚಾನೆಲ್ ಮತ್ತು ಗ್ರೂಪ್, ಸ್ಥಳೀಯ ದೃಶ್ಯ ಮಾದ್ಯಮಗಳ ಮೂಲಕ ಪ್ರಸಾರಗೊಳ್ಳಲಿದೆ. ಪುತ್ತೂರಿನ ಪತ್ರಕರ್ತರು, ತಾಲೂಕು ಪತ್ರಕರ್ತರ ಸಂಘ, ವಿಭಾ ಟೆಕ್ನಾಲಜಿ ಹಾಗೂ ಸಿಟಿವಿ ಕೇಬಲ್ ನೆಟ್ವರ್ಕ್ನವರು ಕಾರ್ಯಕ್ರಮಕ್ಕೆ ಸಹಕರಿಸಲಿದ್ದಾರೆ. ನೀವೂ ವೀಕ್ಷಿಸುವಂತೆ ಕೋರುತ್ತೇವೆ.