ಹಿರಿಯ ಸಾಹಿತಿ, ಸಂಶೋಧಕ, ಪ್ರಸಂಗಕರ್ತ ಪ್ರೊ.ಅಮೃತ ಸೋಮೇಶ್ವರರವರು 2020ನೇ ಸಾಲಿನ ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಇದೇ ಅಕ್ಟೋಬರ್ 10ರಂದು ಅಪರಾಹ್ನ ಬಾಲವನದಲ್ಲಿ ನಡೆಯುವ ಡಾ.ಶಿವರಾಮ ಕಾರಂತರ ಜನ್ಮ ದಿನಾಚರಣೆಯಂದು ಈ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಪ್ರೊ. ಸೋಮೇಶ್ವರರವರಿಗೆ ನೀಡಿ ಗೌರವಿಸಲಾಗುವುದು.