ಎಲ್ಲಾ ಗೌರವಾನ್ವಿತರೇ,
ಬಾಲವನ ಡಾ.ಶಿವರಾಮ ಕಾರಂತರ ಕರ್ಮಭೂಮಿ. ನಲವತ್ತು ವರ್ಷ ಡಾ.ಕಾರಂತರ ಉಪಸ್ಥಿತಿಯಲ್ಲಿ, ಆ ನಂತರ ತನ್ನದೇ ಆದ ವ್ಯವಸ್ಥೆಯಲ್ಲಿ ನಿರಂತರ ಚಟುವಟಿಕೆಯನ್ನು ರೂಪಿಸುತ್ತಾ ಬಂದ ಕೇಂದ್ರವಿದು. ಡಾ.ಕಾರಂತರಿಗೆ ಪ್ರಿಯರಾದ ಮಕ್ಕಳು ಹಾಗೂ ಕಲೆ, ಸಾಹಿತ್ಯದ ಕಲರವಗಳಿಂದ ಕರಾವಳಿ ಭಾಗದ ಜನರಿಗೆ ಸದಾ ಮುದನೀಡುತ್ತಾ ಬಂದ ತಾಣವಿದು. ಈ ಕೇಂದ್ರದಲ್ಲಿ ನಿರಂತರ ಚಟುವಟಿಕೆ ನಡೆಯಬೇಕು, ಆ ಮಾಹಿತಿ ಹೆಚ್ಚುಹೆಚ್ಚು ಸಹೃದಯರಿಗೆ ತಲುಪಬೇಕು ಎನ್ನುವ ಒತ್ತಾಸೆ ಎಲ್ಲರದ್ದು. ಈ ಹಿನ್ನಲೆಯಲ್ಲಿ ಡಾ. ಶಿವರಾಮ ಕಾರಂತರನ್ನು ಒಂದಲ್ಲ ಒಂದು ರೀತಿಯಿಂದ ಇಷ್ಟಪಡುವ ಸಮಾನ ಮನಸ್ಕರ ಗುಂಪೊಂದನ್ನು ಇಲ್ಲಿ, ಹೀಗೆ ರಚಿಸಿದ್ದೇವೆ. ಸದ್ಯ ಬಾಲವನದ ಚಟುವಟಿಕೆ ಹಾಗೂ ಡಾ.ಕಾರಂತರ ಕುರಿತಾದ ವಿಚಾರಗಳನ್ನು ಎಡ್ಮಿನ್ ಮೂಲಕ ಮಾತ್ರ ಪ್ರಕಟಿಸುವ ಈ ಗುಂಪು ಮುಂದೆ ಹೆಚ್ಚು ಮುಕ್ತವಾಗಲಿದೆ. ತಮ್ಮನ್ನು ಈ ಗುಂಪಿಗೆ ಗೌರವಪೂರ್ವಕವಾಗಿ ಆಹ್ವಾನಿಸುತ್ತಾ ತಮ್ಮ ಅಭಿಪ್ರಾಯಗಳಿದ್ದಲ್ಲಿ ಸೇರ್ಪಡೆಗೊಳಿಸಿದ ತಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಬಹುದೆಂದು ವಿನಂತಿಸುತ್ತೇವೆ. ತಾವು ಬಾಲವನದ ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತಾ ಬೆಂಬಲಿಸಬೇಕಾಗಿ ಕೋರುತ್ತೇವೆ. ವಂದನೆಗಳು.
Thanks for Initiating a very needful activity through this group. Thanks for adding me in this group. As a person from Physics teaching and Professor of Folklore I am working on FolkTechnology. I can prepare activity centered science learning to kids. When time needs I am ready to extend my service to BALA vANA.
Thanks and regards
Ee Mahattara karyakke shubhavagali.🙏🏻
ಶಿವರಾಮ ಕಾರಂತರ ಬಾಲವನಕ್ಕೆ ಪುನಶ್ಚೇತನ ಒದಗಲಿ. ಆ ಮಹಾತ್ಮನ ಹೆಸರಲ್ಲಿ ಕೈಗೊಳ್ಳುವ ಚಟುವಟಿಕೆಗಳಲ್ಲಿ ಪಾಲುಪಡೆಯುವುದೆಂದರೆ ವಿಷಯ ಸಣ್ಣದಲ್ಲ.... ನಾವೆಲ್ಲ ಸಹಜವಾಗಿಯೇ ಜತೆಯಾಗುತ್ತೇವೆ... ಒಳಿತಾಗಲಿ.
ಬಾಲವನದ ಗುಂಪು ರಚನೆ ಸ್ವಾಗತಾರ್ಹ. ಕಾರಂತರು ಕನ್ನಡದ, ಕರ್ನಾಟಕದ ಆಸ್ತಿ. ಈ ಗುಂಪಿನಲ್ಲಿರುವವರೆಲ್ಲರೂ ಪ್ರಜ್ಞಾವಂತರೆಂದು ಭಾವಿಸಿದ್ದೇನೆ.ಬಾಲವನದ ಒಳಗೆ ಹಾಗೂ ಹೊರಗೆ ಒಂದಷ್ಟು ರಚನಾತ್ಮಕ ಕೆಲಸಗಳಾಗಲಿ. ನಾವು ಸದಾ ನಿಮ್ಮೊಂದಿಗಿದ್ದೇವೆ.
ಬಾಲವನ ಚಿಂತನೆ, ಯೋಜನೆ, ವಿಸ್ತಾರವಾಗಲಿ.. ದಾಖಲಾಗಲಿ.
'ಪರಿಸರ' ಕಾರಂತರ ತುಂಬಾ ಆಸಕ್ತಿಯ ಕ್ಷೇತ್ರವಾಗಿತ್ತು. ಈ ಕುರಿತಾಗಿ ಮಕ್ಕಳಿಗೆ ಹಾಗು ಸಾರ್ವಜನಿಕರಿಗೆ ಕೇಂದ್ರ ವತಿಯಿಂದ ಹೆಚ್ಚು ಕಾರ್ಯಕ್ರಮಗಳು ನಡೆಯಲಿ.ನಿಮ್ಮ ಎಲ್ಲಾ ಯೋಜನೆಗಳಿಗೆ ನನ್ನ ಬೆಂಬಲವಿದೆ.ಹಾಗು ಶುಭಾ ಹಾರೈಸುವೆ.
ಅಭಿನಂದನೆಗಳು. ಕಾರಂತರು ಚೈತನ್ಯ ಬಾಲವನದ ಚಟುವಟಿಕೆಗಳಲ್ಲಿ ಪ್ರತಿಫಲಿಸುವಂತಾಗಲಿ. ಎಲ್ಲ ಕನ್ನಡಿಗರಿಗೂ ಬಾಲವನ ದಕ್ಕುವಂತಾಗಲಿ. ಮಕ್ಕಳ ಕಲಿಕೆಯ ಒಂದು ಮುಖ್ಯ ಆಕರವಾಗಿ ಎಂದು ಹಾರೈಸುತ್ತೇನೆ.
ನಮಸ್ತೇ. ನನ್ನನ್ನು 'ಕಾರಂತಜ್ಜ'ನ ಹೆಸರಿನ ಗುಂಪಿಗೆ ಸೇರಿಸಿದ ನಿಮ್ಮ ಪ್ರೀತಿ ಹಾಗೂ ವಿಶ್ವಾಸಗಳಿಗೆ ಕೃತಜ್ಞ ನಾಗಿದ್ದೇನೆ.
ನನ್ನ ಮಿತಿ ಮತ್ತು ಸಾಧ್ಯತೆಗಳನ್ನರಿತು,ಒಪ್ಪಿ, ರಚನಾತ್ಮಕವಾಗಿ ಸ್ಪಂದಿಸುವೆ,ಸರ್. ಬಾಲವನದೊಂದಿಗೆ ಬೆಸೆಯಲಿರುವ ನಿಮ್ಮ ಸಾಂಸ್ಕೃತಿಕ ಕನಸುಗಳೆಲ್ಲವೂ ನನಸಾಗಲಿ.
ಹೃತ್ಪೂರ್ವಕ ಶುಭಾಶಯಗಳು.
ಕಾರಂತರ ಶೈಕ್ಷಣಿಕ ಚಿಂತನೆಗಳ ಕುರಿತಾಗಿ ಶಿಕ್ಷಕರಲ್ಲಿ ಮತ್ತು ಶಿಕ್ಷಣಾಸಕ್ತರಲ್ಲಿ ಮಾಹಿತಿಯ ಕೊರತೆ ಇದೆ. ಆದರೆ ಆಸಕ್ತಿ ಅಪಾರವಾಗಿದೆ. ಇದರ ಬಗ್ಗೆ ಏನಾದರೂ ನಿರ್ದಿಷ್ಟ ಕಾರ್ಯಕ್ರಮವನ್ನು ರೂಪಿಸುವುದು ನಮ್ಮಲ್ಲರ ಗುರಿಯಾಗಬೇಕು.
ಧನ್ಯವಾದ.
ವಂದನೆಗಳು.ಒಳ್ಳೆಯ ಕಾರ್ಯಕ್ರಮ ಒಳ್ಳೆಯದಾಗಲಿ ನಿಮ್ಮೊಟ್ಟಿಗಿರುವೆ
ನಮಸ್ಕಾರ, ನನ್ನನ್ನು ಗುಂಪಿಗೆ ಸೇರಿಸಿದ್ದಕ್ಕಾಗಿ ಧನ್ಯವಾದಗಳು. ನನ್ನಿಂದ ಏನಾದರೂ ಆಗಬೇಕಾದಲ್ಲಿ ದಯವಿಟ್ಟು ತಿಳಿಸಿ.
ಕನ್ನಡ ಭಾಷೆ, ಕಲೆ, ಸಾಹಿತ್ಯವನ್ನು ಹಾಗೂ ಶಿವರಾಮ ಕಾರಂತರನ್ನು ಪ್ರೀತಿಸುವ, ಗೌರವಿಸುವ ಪ್ರತಿಯೊಬ್ಬರಿಗೂ ಬಾಲವನದ ಮೇಲೆ ಗೌರವ ಇರುತ್ತದೆ.
ಎಲ್ಲರೂ ಜತೆಯಾಗಿ ಸಹಕರಿಸೊಣ. ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದ ಸಂಪರ್ಕ ಅದಕ್ಕೆ ಸಹಕಾರಿಯಾಗಲಿ.
ಕಾಸರಗೋಡು ಭಾಗದ ಸಹಾಯ ಸಹಕಾರ ಸದಾ ಇದೆ.
ಪ್ರಿಯ ಸುಂದರ್, ಶುಭಾಶಯಗಳು. ಮುಂದುವರಿಯಿರಿ. ಅಗತ್ಯವಿರುವಾಗಲೆಲ್ಲ ಸಹಾಯಕ್ಕೆ ನಿಮ್ಮ ಜತೆ ನಾನು ಇರುತ್ತೇನೆ.
ಅಭಿನಂದನೆಗಳು ..ಇಂತಹ ಒಳ್ಳೆಯ ಕಾರ್ಯಕ್ಕೆ ಎಲ್ಲರನ್ನು ಜೊತೆ ಸೇರಿಸಿರುವುದಕ್ಕೆ ಅಭಿವಂದನೆಗಳು..
ಆತ್ಮೀಯರೇ,ಎಲ್ಲರ ಸಹಕಾರದಿಂದ ಕಾರಂತರ ಕಾರ್ಯಕ್ಷೇತ್ರವಾಗಿದ್ದ ಬಾಲವನ, ಇನ್ನು ಮುಂದೆ ಸದಾ ಚಟುವಟಿಕೆಯ ಕೇಂದ್ರವಾಗಿ ಮುನ್ನಡೆಯಲಿ. ಶುಭ ಹಾರೈಕೆಗಳು.
Idara nirmanadalli nanna pathravu ide Puttur MLA aagi danyavadagalu
ಡಾ.ಶಿವರಾಮಕಾರಂತರ ಬಾಲವನದಲ್ಲಿ ಯಕ್ಷ ಸೇವೆ ಮಾಡಲು ಸದಾ ಸಿದ್ದನಾಗಿದ್ದೇನೆ ಸರ್
ಕಾರ್ಯವೆಲ್ಲವು ಯಶಶ್ವಿಯಾಗಲಿ ಸರ್ ಶುಭವಾಗಲಿ
ಡಾ|| ಸುಂದರ ಕೇನಾಜೆಯವರೆ, ನಮಸ್ಕಾರ. ಕಾರಂತಜ್ಜ ರು ಎಂದೆಂದಿಗೂ ಕಾರಂತಜ್ಜರೇ ಆಗಿರಲಿ. ಬಳಗವು ಧನಾತ್ಮಕವಾಗಿ ಕ್ರಿಯಾಶೀಲವಾಗಿರುವಂತೆ ಹೃತ್ಪೂರ್ವಕ ಸಹಕಾರವಿದೆ.
ಅನಂತಾನಂತ ಧನ್ಯವಾದಗಳು.
Sir...ಶುಭೋದಯ,... ತಮ್ಮ ವಾಟ್ಸಾಪ್ ಬಳಗಕ್ಕೆ ಸೇರಲು ಸಂತೋಷವಿದೆ.... ಶುಭಾಶಯಗಳು
ಗ್ರೂಪಿಗೆ ಸೇರ್ಪಡೆಗೊಂಡಿರುವುದು ಸಂತೋಷ. ನಮ್ಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ವತಿಯಿಂದ ಸಹಕಾರ ಬೇಕಾದಲ್ಲಿ ನಾವು ಸಿಧ್ಧ.
ಊರಿಗೆ ಬಂದಾಗ ಬಾಲವನಕ್ಕೆ ಬರುವೆ.... ಸೃಜನಶೀಲ ಕೆಲಸಗಳಾಗಲಿ.... ಬಾಲವನವು ಕರಾವಳಿಗಷ್ಟೇ ಸೀಮಿತವಾಗದೇ ರಾಜ್ಯದಾದ್ಯಂತ ಹೆಸರು ಗಳಿಸಲಿ..
ನಿಮ್ಮ ಆಶಯ, ಪ್ರಯತ್ನ ಮತ್ತು ಆರಂಭಕ್ಕೆ ಅಭಿನಂದನೆಗಳು. ನಾನು ಸುಮಾರು 16 ವರ್ಷಗಳ ಕಾಲ (1960-1976ರಲ್ಲಿ ಅಂದರೆ ನನ್ನ 6ನೇ ವಯಸ್ಸಿನಿಂದ 22ರ ತನಕ) ಬಾಲವನದ ಪಕ್ಕದಲ್ಲೇ ಇದ್ದ ನಮ್ಮ ಮನೆಯಲ್ಲಿ ಬೆಳೆದವನು. (ಪರ್ಲಡ್ಕ ಶಾಲೆಯಲ್ಲೇ ನನ್ನ ವಿದ್ಯಾರಂಭ! ಮುಂದೆ ಮೈ ದೇ ದೇವುಸ್ ಶಾಲೆ, ಫಿಲೋಮಿನಾ ಹೈಸ್ಕೂಲು, ಕಾಲೇಜು ಹೀಗೆ) ಕಾರಂತರು ವಾಕ್ ಹೋಗುತ್ತಿದ್ದಾಗ (ಅವರು ಕೋರ್ಟ್ ರಸ್ತೆಯ ಎ.ಪಿ.ಸುಬ್ಬಯ್ಯನವರ ಕಚೇರಿಯ ಹೊರಗೆ ಕುಳಿತು ಅವರೊಂದಿಗೆ ಹರಟುತ್ತಿದ್ದರು.) ಮನೆಯ ಗೇಟಿನೆದುರು ನಿಂತು ಕೆಲವು ಬಾರಿ ನಮಸ್ಕರಿಸಿದ್ದಿದೆ. ಅವರೊಂದಿಗೆ ಸ್ವಲ್ಪ ಕಾಲ ಆಗ ಪುತ್ತೂರಿನಲ್ಲಿ ನ್ಯಾಯಾಧೀಶರಾಗಿದ್ದ ಸೇವ ನಮಿರಾಜ ಮಲ್ಲರೂ ಇರುತ್ತಿದ್ದರು! ನನ್ನ ತಂದೆಯವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಮನೆಗೆ ಬಂದು ವಿಚಾರಿಸಿದ್ದರು. ಅವರ ಒಂದು ಕಾದಂಬರಿಯ ಬರವಣಿಗೆಗೆ ನನ್ನ ಸೋದರಿ ಕೆಲವು ವಾರಗಳು ಹೋಗಿದ್ದಳು. (ಅನಂತರ ಕುಂದಾಪುರದವರೊಬ್ಬರು ಮುಂದುವರಿಸಿದರು!) ನೆನಪುಗಳು ಅನೇಕ. ಕಾರಂತರ ನೆನಪಿನ ಭಾಷಣವೊಂದನ್ನು ಬಾಲವನದಲ್ಲಿ ಈಗ ಕೆಲವು ವರ್ಷಗಳ ಹಿಂದೆ ಮಾಡಿದ್ದೆ. ಆಗ ಈ ನೆನಪುಗಳನ್ನು ಮೆಲುಕುಹಾಕಿದ್ದೇನೆ!)
ನಿಮಗೆ ಶುಭವಾಗಲಿ. ಕಾರಂತರು ಸಹಿಸದ ಸಾಮಾಜಿಕ ವಿಷಮತೆಯ ಈ ಕಾಲ-ಸಂದರ್ಭದಲ್ಲಿ ನನ್ನಿಂದ ಯಾವ ಸ್ವರೂಪದ ನೆರವನ್ನು ನೀಡಬಹುದೋ ಗೊತ್ತಿಲ್ಲ. ಸಹಕಾರವಂತೂ ಇದ್ದೇ ಇದೆ.
(ನಮ್ಮ ಮನೆ ಪುತ್ತೂರು ಬೈಪಾಸಿಗೆ ಹೋಗಿ ಅದರ ಮೇಲೇ ಆ ರಸ್ತೆ ಹೋಗುತ್ತಿದೆ!)
ಇಂದಿನ ವಿಷಮ ಸ್ಥಿತಿಯಲ್ಲೂ ನೀವೆಲ್ಲ ಕಾರ್ಯೋನ್ಮುಖರಾದ ರೀತಿ ಬಹಳ ಖುಷಿ ತಂತು. ಒಳಿತಾಗಲಿ 👌👍🏻
ಶುಭಾಶಯಗಳು ನಮ್ಮೂರ ಬಾಲವನ ನಳನಳಿಸಲಿ
ಪುಸ್ತಕ ಪ್ರೀತಿ ಅಭಿಯಾನ
ನಾರಾಯಣ ಮಂಜೇಶ್ವರ ಅವರು "ಶಿವರಾಮ ಕಾರಂತರೊಂದಿಗೆ ಕೆಲವರ್ಷಗಳು" ಕಳೆದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ವಿಟ್ಲದಲ್ಲಿ "ಸಾಧನಾ ಪ್ರಿಂಟಿಂಗ್ ಪ್ರೆಸ್" ನಡೆಸಿ, ಹೆಸರು ಪಡೆದಿದ್ದರು. ಕಾರಂತರ ಕುರಿತಾಗಿ ಇವರ ಸಂದರ್ಶನ ದೂರದರ್ಶನದಲ್ಲಿ ಪ್ರಸಾರವಾಗಿತ್ತು ಶ್ರೀಯುತರು ಈಗ ನಮ್ಮೊಂದಿಗಿಲ್ಲ, ಈ ಕೃತಿ ಇದೆ.
ನಮಸ್ತೆ ಸರ್. ಕಾರಂತ ಬಾಲವನ ಸರ್ವರ ಸ್ನೆ!ಹವನವಾಗಲಿ. ಗ್ರೂಪ್ ಗೆ ಸೇರಿಸಿದ್ದಕ್ಕೆ ಧನ್ಯವಾದಗಳು.
ಅಭಿವೃದ್ಧಿಯ ಕಡೆಗೆ ಮೊದಲ ಹೆಜ್ಜೆ ಇಟ್ಟಿರುವ ನಿಮಗೆ ಶುಭವಾಗಲಿ.
ಮೊದಲಾಗಿ ಅಭಿನಂದನೆಗಳು. ಅಸಾಧ್ಯವನ್ನು ಸಾಧಿಸಲಾರೆವು. ಆದರೆ ಸಾಧ್ಯವಾಗುವುದು, ಸಾಧ್ಯವಾಗಬೇಕಾದ್ದು ಸಾಧಿಸುವ ಛಲ,ಸಂಘಟನಾಶಕ್ತಿ. All the best.
ಕಾಲಿಗೆ ಗೆಜ್ಜೆ ಕಟ್ಟಿ ಕುಣಿದ, ಕಡಲತಡಿಯ ಭಾರ್ಗವ ಡಾ|ಶಿವರಾಮ ಕಾರಂತರ ಬಾಲವನದ ಕಾರ್ಯ ಯೋಜನೆಗಳಲ್ಲಿ ಅಚ್ಚಳಿಯದ ಹೆಜ್ಜೆಗಳಾಗಿ ಮೂಡಿಬರಲಿ . ತಾವು ಸೂಚಿಸಿದಲ್ಲಿ ತ್ರಿಕರಣಪೂರ್ವಕ ಸೇವಾರ್ಥಿಯಾಗಲು ಸಿದ್ದನಿದ್ದೇನೆ. ಸಂಪರ್ಕ ಸೇತು ಗುಂಪಿಗೆ ಸೇರ್ಪಡೆಗೊಳಿಸಿದ್ದಕ್ಕೆ ಧನ್ಯವಾದಗಳು.
Namaste sir Karantara kuritada gumpondannu madiddu tumba santosha. Avara sadhane , yaksha kaleya kuritada avara thudita , sahitya kshetradalli avaru thodagisikonda pari ananya. Obba kalavidanagi jotheyagi eddene🙏dhanyavadagalu. Gurutisi serisida nimage krutajnategalu.
ನಮ್ಮಂತಹ. ಸಾಮಾನ್ಯ ಕಲಾಸೇವಕರನ್ನೂ. ಗುರ್ತಿಸಿ. ಗುಂಪಿನಲ್ಲಿ. ಸೇರಿಸಿದ. ನಿಮ್ಮ ಹೃದಯ ಶ್ರೀಮಂತಿಕೆಗೆ. ವಂದನೆಗಳು. ಸಾರ್🙏🙏
ನನ್ನನ್ನು ಗುರುತಿಸಿಕೊಂಡಿರುವುದಕ್ಕೆ ಸಂತೋಷ ಪಡುತ್ತೇನೆ..... ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ನಾನಿರುತ್ತೇನೆ.
ಶುಭ ಹಾರೈಕೆಗಳು.... ಸರ್
ಬಾಲವನದಲ್ಲಿ ಬಹಳಷ್ಟು ಕೆಲಸ ಮಾಡಬೇಕಾಗಿದೆ. ಮಾಡುವ ಸಾಮರ್ಥ್ಯ ಉತ್ಸಾಹ ಮತ್ತು ತಿಳುವಳಿಕೆ ಮುಖ್ಯ. ನಾನೂ ನಿಮ್ಮೊಂದಿಗೆ ಇದ್ದೇನೆ..
ನಮಸ್ತೇ ಸಾರ್. ಅಭಿನಂದನೆಗಳು.
ಸದಾ ಕ್ರೀಯಾಶೀಲವಾಗಿ ಸಮಾಜಕ್ಕೇ ಮಾದರಿಯಾಗಿ ಮುಂದುವರೆಯಲಿ ಎಂದು ಹಾರೈಸುವೆ.
ಒಳ್ಳೆಯ ಕೆಲಸ ಕೇನಾಜೆ. ಶುಭವಾಗಲಿ. ನಮ್ಮಿಂದ ಸಹಾಯ ಬೇಕಿದ್ದರೆ ತಿಳಿಸಿ. ಕುಪ್ಪಳ್ಳಿಯಂತೆ ಬಾಲವನ ಕೂಡ ಆಗಲಿ.
ಕಾರಂತರ ಬಾಲವನ ವಾಟ್ಸಾಪ್ ಗುಂಪು ರಚಿಸಿ ಹಲವಾರು ಸೃಜನಶೀಲ ವ್ಯಕ್ತಿತ್ವದವರನ್ನು ಸೇರಿಸಿಕೊಡಿದ್ದೀರಿ. ಕಾರಂತರ ಆಶಯದಂತೆ ಕಾರ್ಯಕ್ರಮಗಳನ್ನು ಸಂಘಟಿಸಲು ಎಲ್ಲರ ಸಹಕಾರ ದೊರೆಯುವುದರಲ್ಲಿ ಸಂಶಯವಿಲ್ಲ. ಯಶಸ್ಸಾಗುತ್ತದೆ.
ಡಾ.ಕಾರಂತರ ಬಾಲವನದಿಂದ ಉಪಯುಕ್ತ ಕಾರ್ಯಕ್ರಮ ನಡೆದು ಮಾದರಿಯಾಗಲಿ. ಮಾಧ್ಯಮದ ಕಡೆಯಿಂದ ಹಾಗು ವೈಯಕ್ತಿಕ ನೆಲೆಯಲ್ಲಿ ಪೂರ್ಣ ಸಹಕಾರ ನೀಡಲು ಬದ್ಧ.