ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

ಕಾರಂತರ ಬಗ್ಗೆ

  ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕೋಟದಲ್ಲಿ 1902 ಅಕ್ಟೋಬರ್ 10 ರಂದು ಶಿವರಾಮ ಕಾರಂತರ ಜನನವಾಯಿತು. ಶೇಷ ಕಾರಂತ, ಲಕ್ಷ್ಮೀ ಕಾರಂತ ಎಂಬ ದಂಪತಿಗಳ ಚತುರ್ಥ ಪುತ್ರರಾಗಿ ಶಿವರಾಮ ಕಾರಂತರು ಹುಟ್ಟಿದರು. ಇವರ ಪ್ರಾಥಮಿಕ ವಿದ್ಯಾಭ್ಯಾಸವು ಕೋಟದ ಸರಕಾರಿ ಶಾಲೆಯಲ್ಲಿನಡೆಯಿತು. 1912 ರಲ್ಲಿ ಕುಂದಾಪುರದ ಹೈಸ್ಕೂಲನ್ನು ಸೇರಿದರು. ಅಲ್ಲಿ ಸುಮಾರು 8 ವರ್ಷಗಳ ತನಕವಿದ್ಯಾಭ್ಯಾಸವನ್ನು ಪಡೆದು, 1920 ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ನಂತರ ಮಂಗಳೂರು ಸರಕಾರಿ ಕಾಲೇಜನ್ನು ಸೇರಿ ವಿಜ್ಞಾನ ಮತ್ತು ಗಣಿತಗಳನ್ನು ಐಚ್ಚಿಕ ವಿಷಯಗಳನ್ನಾಗಿ ಆರಿಸಿಕೊಂಡು ಓದನ್ನು ಮುಂದುವರಿಸಿದರು.ಇದೇ ಅವಧಿಯಲ್ಲಿ ಮಹಾತ್ಮಾ ಗಾಂಧೀಜೀಯವರ ಸ್ವಾತಂತ್ರ್ಯ ಆಂದೋಲನದಿಂದ ಪ್ರಭಾವಿತರಾಗಿ,1921ರ ಫೆಬ್ರವರಿಯಲ್ಲಿ ಕಾಲೇಜನ್ನು ತ್ಯಜಿಸಿ, ರಾಷ್ಟ್ರೀಯ ಚಳುವಳಿಯಲ್ಲಿ ಪಾಲುಗೊಂಡರು. ಕಾರಂತರು ಕವನ, ಕಾದಂಬರಿ, ನಾಟಕ, ಸಣ್ಣಕತೆ, ಬಾಲ ಸಾಹಿತ್ಯ, ವಿಜ್ಞಾನ, ಕಲೆ,ಪ್ರವಾಸ ಕಥನ, ಯಕ್ಷಗಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಕನ್ನಡ ನಾಡು ನುಡಿಗೆ ವಿಶೇಷವಾದ ಸೇವೆಯನ್ನು ಸಲ್ಲಿಸಿದರು, ನಾಟಕಗಳನ್ನು ಬರೆದು, ನಿರ್ದೇಶಿಸಿ, ಅಭಿನಯಿಸಿ ಸಮಾಜ ಸುಧಾರಣೆಗೆ ಶ್ರಮಪಟ್ಟರು. ಭಾರತದ ಮಹಾನ್ ಮೇಧಾವಿಗಳಲ್ಲೊಬ್ಬರಾದ ಅಭಿನವ ಭಾರ್ಗವ, ನಡೆದಾಡುವ ವಿಶ್ವಕೋಶ ಎಣಿಸಿದ ಕಾರಂತರಿಗೆ ದೇಶ, ವಿದೇಶಗಳ ಹಲವಾರು ಪ್ರತಿಷ್ಟಿತ ಪ್ರಶಸ್ತಿ, ಗೌರವ, ಬಹುಮಾನ,ಸನ್ಮಾನಗಳು ಅರಸಿ ಬಂದವು , ಇವರ ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿಲಭಿಸಿದೆ, ಬೆಟ್ಟದ ಜೀವ, ಚಿಗುರಿದ ಕನಸು, ಚೊಮನ ದುಡಿ ಕಾದಂಬರಿಗಳು ಚಲನಚಿತ್ರವಾಗಿ ಮೂಡಿಬಂದಿದೆ.