ಹತ್ತೂರಿನಲ್ಲಿ ಖ್ಯಾತಿವೆತ್ತ ಪುತ್ತೂರಿಗೊಂದು ಬಾಲವನ. ಕಾರಂತರ ಪುಣ್ಯನೆಲ. ತನ್ನ ಸಾಹಿತ್ಯ ಸೃಷ್ಠಿಗಳೊಂದಿಗೆ ಮೇಲುಸ್ತರಕ್ಕೆ ಏರಲ್ಪಟ್ಟ ಕರ್ಮ ಭೂಮಿ. ದೂರದ ಕೋಟದಿಂದ ಇಲ್ಲಿಗೆ ಬಂದು ಪ್ರಕೃತಿಯ ಮಡಿಲಿನಲ್ಲಿ ಜೀವನದ ಹೋರಾಟದೊಂದಿಗೆ, ಸಮಗ್ರ ಕೋನವನ್ನು ಸ್ಪರ್ಷಿಸಿ ಧನ್ಯತೆಯ ಭಾವವನ್ನು ಕಾಣಲು ಸಾಧ್ಯವಾದ ದಿವ್ಯ ಕ್ಷೇತ್ರ. ಅಂತಹ ಬಾಲವನವು ಕಾರಂತರು ಬಿಟ್ಟು ಹೋದಾಗ ಅಕ್ಷರಶಃ ಅನಾಥವಾಗಿತ್ತು. ಆದರೆ ಪುತ್ತೂರಿನ ಸಹೃದಯರು ಮತ್ತೆ ಅದಕ್ಕೆ ಜೀವ ತುಂಬಲು ಪ್ರಯತ್ನಿಸಿದರು; ಸರಕಾರ ಬೆನ್ನೆಲುಬಾಯಿತು; ಅದರ ಫಲವಾಗಿ ಬಾಲವನ ತನ್ನದೇ ರೀತಿಯಲ್ಲಿ ಶೋಭಿಸುತ್ತಿದೆ. ಕಾರಂತರನ್ನು ಈ ಮಣ್ಣಿನಲ್ಲಿ ನೆನೆಪಿಸುತ್ತಿದೆ.
ಬಾಲವನದ ಬಗ್ಗೆ ಕಾರಂತರ ಬಗ್ಗೆ