ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

ಡಾ. ಶಿವರಾಮ ಕಾರಂತರ ಮನೆ

ಡಾ.ಶಿವರಾಮ ಕಾರಂತರು 1922ರಿಂದ 1972ರ ವರೆಗೆ ವಾಸ್ತವ್ಯವಿದ್ದ ಮನೆ ಇದಾಗಿದೆ. ಈ ಮನೆಯನ್ನು 1955ರಲ್ಲಿ ನಿರ್ಮಿಸಲಾಯಿತು. ಮುಂದೆ ಡಾ.ಕಾರಂತರು ತನ್ನ ಪತ್ನಿ ಶ್ರೀಮತಿ ಲೀಲಾ ಕಾರಂತರೊಂದಿಗೆ ತನ್ನ ಮಕ್ಕಳಾದ ಹರ್ಷ, ಮಾಳವಿಕ, ಉಲ್ಲಾಸ್ ಹಾಗೂ ಕ್ಷಮಾ ಇವರನ್ನು ಬೆಳಸಿದ ಮನೆಯೂ ಇದೇ ಆಗಿದೆ. ಡಾ.ಕಾರಂತರ ಬಹುತೇಕ ಸಾಹಿತ್ಯಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳು ಈ ಮನೆಯಿಂದಲೇ ನಡೆದಿವೆ. 1973ರಲ್ಲಿ ಈ ಮನೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಸ್ತುವಾರಿಗೆ ವಹಿಸಲಾಯಿತು. ಮುಂದೆ ಈ ಮನೆಯನ್ನು ಮರು ನಿರ್ಮಾಣಗೊಳಿಸಿ ಡಾ.ಶಿವರಾಮ ಕಾರಂತ ಜೀವನಶೈಲಿ ಸಂಗ್ರಹಾಲಯವಾಗಿ ನಿರ್ವಹಣೆ ಮಾಡಲಾಗುತ್ತಿದೆ.