ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

ಬಾಲವನದ ಬಗ್ಗೆ

ಇದೀಗ ಕಲಾ ಗ್ಯಾಲರಿ, ಈಜುಕೊಳ, ತೆರೆದ ರಾಗ ಮಂದಿರ, ನವ್ಯಶಾಲೆ, ಸಭಾಭವನ, ಗ್ರಂಥಾಲಯ,ವಿಶ್ರಾಂತಿ ಗೃಹ, ಮಕ್ಕಳಿಗೆ ಆಟದ ವ್ಯವಸ್ಥೆ, ಕ್ಯಾಂಟೀನ್ ಸೌಲಭ್ಯ ಮುಂತಾದ ವಿಶೇಷತೆಯನ್ನುಬಾಲವನ ತನ್ನ ಮುಡಿಗೇರಿಸಿಕೊಂಡಿದೆ. ಪ್ರತೀ ದಿವಸ ನೂರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಬಾಲವನ ಸಮಿತಿ : ಈ ಸಮಿತಿಯು ಬಾಲವನದ ಸಂಪೂರ್ಣ ಜವಾಬ್ದಾರಿ ಹೊಂದಿದ್ದು ಸಹಾಯಕ ಆಯುಕ್ತರು ಇದರ ಅಧ್ಯಕ್ಷರಾಗಿತ್ತಾರೆ. ಸಮಿತಿ ಸದಸ್ಯರ ವಿವರ ಹೀಗಿದೆ. ಪುತ್ತೂರಿನ ಮಣ್ಣಿನ ಗುಣವೇ ಅಂಥದ್ದು, ಇಲ್ಲಿಗೆ ಕಾಲಿಟ್ಟವರನ್ನು ಅದು ಬೆಳೆಸದೆ ಬಿಡುವುದಿಲ್ಲ. ಈ ರೀತಿ ವಿಶೇಷ ಅನುಭವ ಪಡೆದ ಅದೆಷ್ಟೋ ಸಾಧಕರು ಪುತ್ತೂರಿನಲ್ಲಿದ್ದಾರೆ. ಅಂಥವರ ಪಟ್ಟಿಯಲ್ಲಿ ಸೇರಿಕೊಂಡ ಧೀಮಂತ ಚೇತನ ಡಾ. ಶಿವರಾಮ ಕಾರಂತರು. ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಾರಂತರು ಕೈಯಾಡಿಸದ ಕ್ಷೇತ್ರವೇ ಇಲ್ಲ. ಅಂಥ ಕಾರಂತರು ನೆಲೆನಿಂತು, ತನ್ನ ಜೀವನದ ಅಮೂಲ್ಯ ಸಮಯವನ್ನು ಕಳೆದದ್ದು ಬಾಲವನದಲ್ಲಿ ಎಂದರೆ ಅದು ಪುತ್ತೂರಿನ ಸಹೃದಯರಿಗೆ ಹೆಮ್ಮೆಯ ಸಂಗತಿ. ಅವರು ನಾಲ್ಕು ದಶಕಗಳ ಕಾಲ ತನ್ನ ಸಾಹಿತ್ಯ, ವಿಜ್ಞಾನ, ಮಕ್ಕಳ ಶಿಕ್ಷಣ, ನೃತ್ಯ ಮೊದಲಾದುವುಗಳಿಗೆ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡ ಪುತ್ತೂರಿನ ಬಾಲವನ ಇಂದು ಜೀವಂತ ಸಾಂಸ್ಕೃತಿಕ ಕೇಂದ್ರ.ಅಂಥ ಬಾಲವನ ಇಂದು ಕೂಡ ಪುತ್ತೂರಿನಲ್ಲಿದೆ. ಅಲ್ಲಿಗೆ ಪ್ರವೇಶಿಸಿದಾಗ ಕಾರಂತರ ಸನಿಹದಲ್ಲಿದ್ದ ಹಾಗೆ ಭಾಸವಾಗುತ್ತದೆ.

ಕಾರಂತರು ಸಾಹಿತ್ಯ ಲೋಕಕ್ಕೆ ಅರ್ಪಿಸಿದ ಮೇರು ಕೃತಿಗಳೆಲ್ಲ ಸೃಷ್ಠಿಯಾದದ್ದು ಪುತ್ತೂರಿನಲ್ಲೆ ಎನ್ನುವುದು ಕೂಡ ಅಭಿಮಾನದ ಸಂಗತಿ 1974ರಲ್ಲಿ ಕಾರಂತರು ಪುತ್ತೂರನ್ನು ಬಿಟ್ಟು ಮತ್ತೆ ತನ್ನ ಊರಿಗೆ ಸೇರಿಕೊಂಡಾಗ ಬಾಲವನದೊಂದಿಗೆ ಪುತ್ತೂರು ಕೂಡ ಏನನ್ನೋ ಕಳಕೊಂಡಂತೆ ಆಯಿತು.ಮಹಾನ್ ಜ್ಞಾನಶಕ್ತಿ ಉಸಿರಾಡಿದ, ಓಡಾಡಿದ ನೆಲವನ್ನು ಹಾಗೆ ಬಿಡಬಾರದೆಂದು ಅದನ್ನು ಉಳಿಸಿ ಪುತ್ತೂರಿನೊಂದಿಗಿನ ಕಾರಂತರ ಸಂಬಂಧವನ್ನು ಚಿರಸ್ಥಾಯಿಯಾಗಿಸಲು ಮುಂಚೂಣಿಯಲ್ಲಿ ನಿಂತವರು ಪುತ್ತೂರು ಕರ್ನಾಟಕ ಸಂಘದ ಬಿ.ಪುರಂದರ ಭಟ್, ಕೆ.ಪಿ.ಶೆಟ್ಟಿ, ಬೋಳಂತಕೋಡಿ ಈಶ್ವರ ಭಟ್, ಮಾದವ ನಾಯಕ್, ವಿ,ಬಿ ಮೊಳೆಯಾರ್, ಎನ್. ಸುಬ್ರಮಣ್ಯಂ, ವಿ.ಬಿ ಅರ್ತಿಕಜೆ ಮೊದಲಾದವರು.