ಡಾ.ಶಿವರಾಮ ಕಾರಂತರ ಬಾಲವನ ಪತ್ತೂರು ಹಾಗೂ ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಇದರ ಆಶ್ರಯದಲ್ಲಿ ಬಾಲವನದ ವಾರದ ಆನ್ ಲೈನ್ ಕಾರ್ಯಕ್ರಮದ ಅಂಗವಾಗಿ ಸೆ.19 ಜಯರಾಮ್ ಸುಳ್ಯ ಮತ್ತು ಬಳಗದವರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಜಯರಾಮ್ ಸುಳ್ಯರವರು ಕೊಳಲು, ಶ್ಯಾಮ್ ಭಟ್ ಸುಳ್ಯರವರು ಮೃದಂಗ, ರಮೇಶ್ ರಾವ್ ಕಾವುರವರು ವಯಲಿನ್ ನುಡಿಸಿದರು. ಅರವಿಂದ ನಾಟಿಕೇರಿಯವರು ತಾಳದಲ್ಲಿ ಸಹಕರಿಸಿದರು.
ಡಾ.ಶಿವರಾಮ ಕಾರಂತರ ಬಾಲವನ ದ ವಿಶೇಷ ಕರ್ತವ್ಯ ಅಧಿಕಾರಿ ಡಾ.ಸುಂದರ ಕೇನಾಜೆ ಕಲಾವಿದರನ್ನು ಸ್ವಾಗತಿಸಿ ಪರಿಚಯಿಸಿದರು.
ಈ ಕಾರ್ಯಕ್ರಮ ಡಾ.ಶಿವರಾಮ ಕಾರಂತರ ಬಾಲವನದ ಫೇಸ್ ಬುಕ್, ವಾಟ್ಸ್ ಆಪ್ ಗ್ರೂಪ್, ಸುದ್ದಿ ಮಲ್ಟಿಮೀಡಿಯಾ ಚಾನೆಲ್ ಪುತ್ತೂರು, ಯೂಟ್ಯೂಬ್ ಹಾಗೂ ಇತರ ಅನ್ ಲೈನ್ ಗ್ರೂಪ್ ಗಳಲ್ಲಿ ಪ್ರಸಾರಗೊಂಡಿತು. ಸಿಟಿವಿ ಪತ್ತೂರು ಹಾಗೂ ಪತ್ತೂರು ಪತ್ರಕರ್ತರ ಸಂಘ ಕಾರ್ಯಕ್ರಮಕ್ಕೆ ಸಹಕರಿಸಿತು.