ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

ಬಾಲವನದ ಕಾಡು

ಬಾಲವನದ 5.90 ಎಕ್ರೆ ಆಸ್ತಿಯಲ್ಲಿ ಬರುವ ಕಟ್ಟಡ ಮತ್ತು ರಸ್ತೆಯನ್ನು ಹೊರತುಪಡಿಸಿ ಸಂಮೃದ್ಧ ಕಾಡನ್ನು ಉಳಿಸಲಾಗಿದೆ. ಇದನ್ನು ಡಾ.ಕಾರಂತರೇ ಬೆಳೆಸಿದ್ದಾರೆ. ಅತ್ಯಂತ ಬೆಳೆಬಾಳುವ ಹಾಗೂ ಇತರ ಹಣ್ಣಿನ ಮರಗಳನ್ನು ಹೊಂದಿತುವ ಈ ಕಾಡಿನಲ್ಲಿ ನಾನಾ ಜಾತಿಯ ವಿಶಿಷ್ಟ ಬಳ್ಳಿಗಳು ಹಾಗೂ ಬಿದಿರು ಬೆಳೆದು ನಿಂತಿದೆ. ಅನೇಕ ಔಷಧೀಯ ಗಿಡಗಳಿಗೂ ಇಲ್ಲಿವೆ. ಹಲವು ವೈವಿಧ್ಯಮಯ ಮತ್ತು ಅಪರೂಪದ ಜೀವಿಗಳಿಗೆ ಈ ಕಾಡು ಆಶ್ರಯ ನೀಡಿರುವುದು ಇಲ್ಲಿಯ ವಿಶೇಷ.