ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

ನೆನಪಿನಂಗಳದಲ್ಲಿ... - ಗೋಪಾಲ ಶಾಸ್ತ್ರಿ

ಸುಮಾರು 1964 ರಲ್ಲಿ ಇರಬೇಕು,ನನ್ನ ಅಜ್ಜ ಕುಪುಳುಚಾರು ಮರಿಭಟ್ಟರು  ಶಿವರಾಮ ಕಾರಂತರಿಗೆ ತಮ್ಮ ನೆಲೆಯಲ್ಲಿ ಅವರಿಗೆ ಪ್ರಶಸ್ತಿ ಬಂದುದಕ್ಕೆ ಒಂದು ಸನ್ಮಾನ ಏರ್ಪಡಿಸಿದ್ದರು.  ಬಂದ ಪ್ರಶಸ್ತಿ ಬಹುಶಃ "ಮರಳಿ ಮಣ್ಣಿಗೆ" ಕಾದಂಬರಿಗೆ ಇರಬಹುದು ಎಂದು ನನ್ನ ನೆನಪು.ಸನ್ಮಾನ ಸಮಾರಂಭಕ್ಕೆ, ಕಾಯಿ ಹೋಳಿಗೆ ಮಾಡಿಸಿದ್ದರು. ಯಾಕೆಂದರೆ ಕೋಟ ಬ್ರಾಹ್ಮಣರಿಗೆ ಕಾಯಿ ಹೋಳಿಗೆ  ಇಷ್ಟ ಇರಬಹುದು ಅಂತ ಮಾಡಿಸಿರುವುದು.ಸಾಮಾನ್ಯವಾಗಿ ಆ ಕಾಲದಲ್ಲಿ ಬ್ರಾಹ್ಮಣರು ಕಾಯಿ ಹೋಳಿಗೆಯನ್ನು ಸಮಾರಂಭಕ್ಕೆ ಮಾಡುತ್ತಿದ್ದರು. ಹಾಗಾಗಿ ಕಾರಂತರಿಗೂ ಮಾಡಿಸಿದ್ದರು. ಈ ಸನ್ಮಾನ ಕಲ್ಲಡ್ಕದಲ್ಲಿ ,ಅಂದಿನ ಗೇರುಕಟ್ಟೆ ಛತ್ರ ಅಥವಾ ಇಂದು ಕರೆಯುವ ಕಲ್ಲಡ್ಕದ ಊಮಾ ಮಹೇಶ್ವರ ಕೇತ್ರದಲ್ಲಿ ನಡೆದಿತ್ತು. ಆ ಕಾಲದಲ್ಲಿ ಮರಿಭಟ್ಟರು ಆಗರ್ಭ ಶ್ರೀಮಂತರೂ ಆಗಿದ್ದರು. ಆದರೆ ಸ್ವಲ್ಪ ಕಾಲ ನಂತರ ಭೂಮಸೂದೆ ಕಾನೂನಿನಿಂದ ತನ್ನ ಭೂಮಿಯನ್ನೆಲ್ಲ ಕಳೆದುಕೊಂಡು  ಬಡವರಾಗಿ ತೀರಾ ಕಷ್ಟದಲ್ಲಿ ಇದ್ರು. ಇದೆ ಕಾಲದಲ್ಲಿ ಕಾರಂತರಿಗೆ ಪತ್ರ ಬರೆದು ತಾನು  ಗೇಣಿ ಇಲ್ಲದೆ, ಬಾರಿ ಕಷ್ಟದಲ್ಲಿ ಇದ್ದೇನೆ  ಎಂದು ತಿಳಿಸಿದರು. ಆಗಮರಿಭಟ್ ಕಷ್ಟದಲ್ಲಿದ್ದಾರೆ ಎಂದು ತಿಳಿದ ಕಾರಂತರು ಮರಿಭಟ್ ರಿಗೆ ರೂ 25 ಕಳಹಿಸಿದ್ದರು.ಇದು ಅವರ ಹೃದಯ ಶ್ರೀಮಂತಿಕೆಗೆ ಉದಾಹರಣೆ. ನನ್ನ ಸೋದರ ಮಾವ ಕುಪುಳುಚಾರು ರಾಮಕೃಷ್ಣ ಭಟ್  ಕೂಡ ಅವರ ಗರಡಿಯಲ್ಲಿದ್ದು, "ಗೆಜ್ಜೆ ಕುಣಿತ", "ಏರಿ ಬಂದ ನೀರು", "ಪಮಿ ಬಂದಳು" ಇತ್ಯಾದಿ ಕಾದಂಬರಿಗಳನ್ನು  ಬರೆದಿದ್ದಾರೆ. ಹೀಗೆ ಹಳೆಯ ನೆನಪೊಂದನ್ನು ಇಲ್ಲಿ ಹಂಚಿದ್ದೇನೆ. 

- ಗೋಪಾಲ ಶಾಸ್ತ್ರಿ.  ಪಲ್ ಘಾಟ್  , ಕೇರಳ