ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

ಡಾ. ತಾಳ್ತಜೆ ವಸಂತ ಕುಮಾರ್ ಅವರಿಂದ "ಮೂಕಜ್ಜಿಯ ಕನಸುಗಳು" ಕುರಿತಾಗಿ ಸಂಭಾಷಣೆ

ಡಾ.ಶಿವರಾಮ ಕಾರಂತರ ಬಾಲವನದಲ್ಲಿ ನಡೆಯುವ ಈ ವಾರದ ಕಾರ್ಯಕ್ರಮ ದಿನಾಂಕ: 14.08.2020. ಶುಕ್ರವಾರ ಪೂರ್ವಾಹ್ನ 11.00 ಗಂಟೆಗೆ ಆನ್ ಲೈನ್ ಮೂಲಕ ನಡೆಯಿತು. ಈ ವಾರದ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ಸಾಹಿತಿ, ಸಂಶೋಧಕ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ.ತಾಳ್ತಜೆ ವಸಂತ ಕುಮಾರ್ ರವರು ಡಾ.ಕಾರಂತರ "ಮೂಕಜ್ಜಿಯ ಕನಸು" ಕಾದಂಬರಿಯ ಕುರಿತಾಗಿ ಮಾತನಾಡಿದರು. ಈ ಕಾರ್ಯಕ್ರಮ ಡಾ.ಶಿವರಾಮ ಕಾರಂತ ಬಾಲವನ ಫೇಸ್ ಬುಕ್, ಯೂಟ್ಯೂಬ್, ಬಾಲವನದ ಎಲ್ಲಾ ವಾಟ್ಸ್ ಆಪ್ ಗ್ರೂಪ್, ಸುದ್ದಿ ಮಲ್ಟಿಮೀಡಿಯಾ ಚಾನೆಲ್ ಮತ್ತು ಗ್ರೂಪ್, ಸ್ಥಳೀಯ ದೃಶ್ಯ ಮಾದ್ಯಮಗಳ ಮೂಲಕ ಪ್ರಸಾರಗೊಂಡಿತು. ಪುತ್ತೂರಿನ ಪತ್ರಕರ್ತರು ಮತ್ತವರ ಸಂಘ, ವಿಭಾ ಟೆಕ್ನಾಲಜೀಸ್ ಹಾಗೂ ಸಿಟಿವಿ ಕೇಬಲ್ ನೆಟ್ವರ್ಕ್ನವರು ಕಾರ್ಯಕ್ರಮಕ್ಕೆ ಸಹಕರಿಸಿದರು.

https://www.facebook.com/balavana.puttur/videos/712425432940126